ಎಂದೊ ಮೂಡಿದೆ ನನ್ನ ಮನಸಲ್ಲಿ ಬಯಕೆ
ನೀ ಬಂದು ಸೇರು ಈ ನನ್ನ ಮನಕೆ
ಅಲ್ಲೂ ಇಲ್ಲೂ ನನ್ನ ಕನಸಲ್ಲೂ ನಿನದೇ ಕನವರಿಕೆ
ನೀ ಉಸಿರಾಗಲು ಬಾ ಈ ನನ್ನ ಜೀವಕೆ
ಎಂದೊ ಮಾಡಿರುವೆ ನಾ ನಿನಗಾಗಿ ಒಂದು ಹರಕೆ
ಬಾ ತೀರಿಸಲು ಹೋಗೋಣ ನಾವು ಬೃಂದಾವನಕೆ
ನಾ ಕೊಡುವೆ ಅಲ್ಲಿ ನಿನಗೊಂದು ಪ್ರೇಮದ ಕಾಣಿಕೆ
ನಾ ಹುಡುಕುತ ಹೊರಟಿರುವೆ ನಿನ್ನ ಆ ಪ್ರೇಮದ ತೀರಕೆ
ನೀ ತುಂಬಿಸು ಬಾ ಬರಿದಾದ ನನ್ನ ಮನಸ್ಸು
ನಿನ್ನ ಪ್ರೀತಿಯ ಒಲವನ್ನು ಮನಸಲ್ಲಿ ಚಿಮ್ಮಿಸು
ಒಲವಿನ ಕನಸಲ್ಲೂ ಅವಳ ಜೊತೆ ಬದುಕುವ ಮನಸ್ಸು
ಓ ದೇವರೇ ನನ್ನ ಗೆಳಥಿಯನೊಮ್ಮೆ ನನಗೆ ತೋರಿಸು
ಎಲ್ಲಿರುವೆ ಹೇಳೇ ನನ್ನ ಮೇನಕೆ
ಕಾಡಿರುವೆ ನನ್ನ ಕನಸಲ್ಲಿ ನೀ ಕಾಡಿರುವೆ
ಕಾದಿರುವೆ ನಿನಗಾಗಿ ನಾ ಕಾದಿರುವೆ
ಎಲ್ಲಿರುವೆ ಹೇಳೇ ಗೆಳತಿ ನೀ ಎಲ್ಲಿರುವೆ