ನನ್ನೊಲವಿನ ಹೂವೆ
ಒಂದೇ ಒಂದು ನೋಟಕೆ ಸೆಳದಳು ನನ್ನ ಹೃದಯ,
ನನಗೆ ಹೇಳದೆ ಕೇಳದೆ ನನ್ನ ಅಪ್ಪಣಿ ಇಲ್ಲದೆ ಆ ಸಮಯ,
ಇಲ್ಲಿಯವರೆಗೂ ನನಗಿರಲಿಲ್ಲ ಅವಳ ಪರಿಚಯ,
ಅರಿತು ಮರೆತು ಈ ಹೃದಯಕ್ಕೆ ತಂದಳು ಅಪಾಯ,
ಆದರು ಮನಸ್ಸು ಯಾಕೋ ಬಯಸುತಿದೆ ಅವಳನ್ನೇ ಗೆಳಯ.
ನಿನ್ನ ಕಂಡ ಕ್ಷಣದಿಂದ ಆ ಸ್ವಪ್ನದ ಸುಳಿಗೆ ಸಿಲುಕಿರುವೆ,
ಆ ಸುಳಿಯಲೂ ಈ ಒಲವಿನ ಪ್ರೀತಿಯ ಬಲೆಗೆ ಜಾರಿರುವೆ,
ಅರಿಯದೆ ನನ್ನೆ ನಾ ಮರೆತರು ನೀ ಈ ಕಣ್ಣಲ್ಲಿ ಕಲೆತಿರುವೆ,
ನನಗೆ ತಿಳಿಯದೆ ಗೆಳತಿ ನೀ ಮನಸಲ್ಲಿ ಬೆರತಿರುವೆ,
ನನ್ನೆದರು ಒಮ್ಮೆ ಬಾರೆ ನನ್ನೊಲವಿನ ಹೂವೆ.
ನಾ ಬರೆದಿರುವೆ ನಿನಗಾಗಿ ಒಂದು ಪ್ರೇಮದ ಕವಿತೆ,
ನೀ ಕೇಳಲು ಬಾ ಒಮ್ಮೆ ನನ್ನ ಪ್ರೇಮ ದೇವತೆ,
ಹಚ್ಚಿರುವೆ ನೀ ನನ್ನ ಎದೆಯಲ್ಲಿ ಪ್ರೇಮದ ಹಣತೆ,
ಅದು ಹಾರುವ ಮುನ್ನ ಬೇಗ ಬಾ ಬಾಳಲು ನನ್ನ ಜೊತೆ,
ನನ್ನೆದರು ಒಮ್ಮೆ ಬಾರೆ ನನ್ನೊಲವಿನ ಹೂವೆ.

No comments:
Post a Comment