ಕಾಡಿದೆ ಗೆಳತಿ ನಿನ್ನ ನೆನಪು
- ಮನಸೇ ಮನಸೇ ನೀ ಮರೆಯದಿರು ಅವಳು ಕೊಟ್ಟ ಕನಸ ,
ಕನಸೇ ಕನಸೇ ನೀ ಕೊರಗದಿರು ಅವಳಿಲ್ಲದ ಈ ನಿಮಿಷ ,
ಅವಳಿಲ್ಲದ ಈ ನಿಮಿಷ ಆಗಿದೆ ಹೃದಯಕ್ಕೆ ಆಯಾಸ ,
ಆಗಿದ್ದರು ಆಯಾಸ ಬಂದೇ ಬರುವಳೆಂದು ಕಾಯುವೆ ಪ್ರತಿ ದಿವಸ .
ಹನಿ ಹನಿಯಾಗಿ ಕಾದಿದೆ ನೆನಪು ಹೃದಯವೇ ಸುಡುವಂತೆ ,
ಸುಡುತ ಇದ್ದರು ವಿರಹದ ಜ್ವಾಲೆ ನಾ ಬಿಡುವುದಿಲ್ಲ ನಿನ್ನ ಚಿಂತೆ ,
ಆ ಗಗನವು ಕೂಡ ಕಂಬನಿ ಸುರಿಸಿದೆ ನದಿಯೇ ಹರಿವಂತೆ ,
ಈ ಕಣ್ಣಿನಲ್ಲಿ ನೆತ್ತರು ಸುರಿದಿದೆ ಎದೆಯೆ ಸಿಡಿವಂತೆ .
- ಸಾವಿರಾರು ಕನಸುಗಳನ್ನು ನೀ ಈ ಮನಸ್ಸಿಗೆ ಕೊಟ್ಟು ,
- ನನಸಾಗುವ ಮುನ್ನ ಏಕೆ ಹೋದೆ ಕಾರಣ ಹೇಳದೆ ನನ್ನ ಬಿಟ್ಟು ,
ನೀ ಕೊಟ್ಟ ಸುಂದರ ಸ್ವಪ್ನಗಳಿಗೆ ನೀನಿಲ್ಲದೆ ಬಿದ್ದಿದೆ ಪೆಟ್ಟು ,- ನೀ ತಿರುಗಿ ಬಂದು ಒಮ್ಮೆ ನನ್ನ ಮನಸ್ಸಿನ ಮನೆಯ ಮುಟ್ಟು .

